ಹೆಂಡತಿ ಹೊಂದಾಣಿಕೆ ಇಲ್ಲದ ಕುರಿತು
ಮದುವೆ ಆಗಿ ಎರಡು ವರುಷ. ನಾನು ಯಾವುದೇ ವರದಕ್ಷಿಣೆ ಪಡೆದಿಲ್ಲ.. ಮದುವೆ ಸಹ ನಮ್ಮ ವೆಚ್ಚದಲ್ಲೇ ಮಾಡಿಕೊಂಡಿದ್ದೇವೆ.ಹಾಗೂ ನನಗೆ ಯಾವುದೇ ಕೆಟ್ಟ ಹವ್ಯಾಸ ಇಲ್ಲ .ನನ್ನ ಪತ್ನಿಗೆ ಯಾವುದೇ ಅಡುಗೆ ಮಾಡಲು ಬರುವಿದಿಲ್ಲ.. ಆದರೂ ನನ್ನ ತಂದೆ ತಾಯಿ ಹೆಣ್ಣು ಮಕ್ಕಳಿಲ್ಲದ ಕಾರಣ ನನ್ನ ಪತ್ನಿ ಯನ್ನು ಸ್ವಂತ ಮಗಳoತೆ ಕೈ ತುತ್ತು ತಿನ್ನಿಸಿ ಪ್ರೀತಿಯಿಂದ ನೋಡಿಕೊಂಡಿದ್ದಾರೆ.. ಪ್ರಸ್ತುತ ಹತ್ತು ತಿಂಗಳ ಮಗು ಇದೆ.. ಆದರೆ ಮದುವೆ ಆದ ಮೊದಲನೇ ತಿಂಗಳಿಂದಲು ನನ್ನ ತಂದೆ ತಾಯಿ ಬಗ್ಗೆ ಚಾಡಿ ಹೇಳಿ ನನ್ನಿಂದ ದೂರ ಮಾಡಲು ನನ್ನ ಪತ್ನಿ ಹಾಗೂ ಅವರ ಮನಿಯಿಂದ ಯತ್ನಿಸುತ್ತಿದ್ದಾರೆ .. ಆ ಪ್ರಯತ್ನ ವಿಫಲವಾಯಿತು.. ಕಾಲ ಕ್ರಮೇಣ ನನ್ನ ಹೆಂಡತಿ ಪ್ರಗ್ನೆನ್ಟ್ಸೀ ಆದ ನಾಲ್ಕು ವರೆ ತಿಂಗಳಿಗೆ ತವರು ಮನೆಗೆ ಒತ್ತಾಯ ಮಾಡಿ ಕರೆದೋಯ್ಯಲು ನನಗೆ ಒಪ್ಪಿಸಿದಾಗ"" ಪತ್ನಿಗೆ ತಿಳಿದಂತೆ ಶಾಸ್ತ್ರ ಕೇಳಿ ಒಳ್ಳೆ ಸಮಯ ದಂದು ಸೀಮಂತ ಮಾಡಿ ಕಳುಹಿಸಿದೆ". ಆದರೆ ಪತ್ನಿ ಹೋದ ಮರು ದಿನವೇ ಅವರ ತವರು ಮನೆಯಲ್ಲಿ ಯಾವುದೇ ವಾಹನ ಚಲಿಸುವ ಪರವಾನಿಗೆ ಇಲ್ಲದ ಹಾಗೂ ಕೆಲವಷ್ಟೇ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ವೈಟ್ ಬೋರ್ಡ್ ಕಾರು ಖರೀದಿಸಿದ ಪತ್ನಿಯ ಅಣ್ಣ ಬಾಡಿಗೆ ಹಣದ ಆಸೆಗೆ ಸ್ವಂತ ಹಳ್ಳಿ ಯಿಂದ ಸುಮಾರು 300 km ದೂರ ಕಾರು ಚಲಿಸುತ್ತೀದ್ದು ಬೇರೊಂದು ವಾಹನ ಓವರ್ ಟೇಕ್ ಮಾಡಲು ಹೋಗಿ ಅಪಘಾತ ವಾಗಿದೆ.. ಅದೃಷ್ಟವಾಸತ್ ನನ್ನ ಪತ್ನಿಯ ಅಣ್ಣನಿಗೆ ಯಾವುದೇ ಹಾನಿ ಆಗಿಲ್ಲ.. ಆದರೂ ಅವನು ಹೋಗಿ ಮಾಡಿಕೊಂಡ ಅಪಘಾತಕ್ಕೆ ನಾನು ಹೊಣೆ ಎಂದು,, ನಾನು ನನ್ನ ಪತ್ನಿ ಯನ್ನು ಅವರ ಮನೆಗೆ ಸರಿಯಾಗಿ ಶಾಸ್ತ್ರ ಕೇಳದೆ ಕಳುಹಿಸಿ ಕೊಟ್ಟ ಕಾರಣ ಅಪಘಾತ ವಾಯಿತು ಎಂದು ನನ್ನ ಪತ್ನಿಯು ಸಹ ನನ್ನನು ಮಾತನಾಡಿಸದೆ ದ್ವೇಶಿಸುತ್ತಿದ್ದಾಳೆ.. ಹಾಗೂ ಬಾನಂತಿ ಕಾಲ ಮುಗಿದಮೇಲೂ ನನ್ನ ಪತ್ನಿ ಮನೆಗೆ ಬರಲು ಒಪ್ಪಿ ಸುಮಾರು ಒಂದು ವರೆ ಲಕ್ಷ ಹಣ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮ ಕ್ಕೆ ನನ್ನಿಂದ ಖರ್ಚು ಮಾಡಿಸಿ ಮತ್ತೆ ತನ್ನ ತವರಿಗೆ ಹೋಗಿ ನಮ್ಮ ಮನೆಗೆ ಬರಲು ನನ್ನನ್ನು ಮಾತನಾಡಿಸಲು ನಿರಾಕರರಿಸುತ್ತಿದ್ದಾಳೆ.. ಇಷ್ಟವಿಲ್ಲವ ಎಂದು ಪ್ರಶ್ನಿಸಿದರು ಎಲ್ಲದಕ್ಕೂ ಮೌನವೇ ಉತ್ತರವಾಗಿದೆ.. ಪತ್ನಿಯ ತಾಯಿ ಕುಟುಂಬದವರು ನಮ್ಮನ್ನೇ ಮಗಳಿಗೆ ಹಿಂಸೆ ನೀಡುತ್ತೀರಾ ಎಂದು ದೂರು ನೀಡುತ್ತೇವೇ ಎಂದು ದಬ್ಬಾಳಿಕೆ ಯಿಂದ ಮಾತನಾಡುತ್ತಾರೆ..ತಾಯಿ ಆದವಳು ಮಗಳಿಗೆ ಗಂಡನ ಜೊತೆ ಖುಷಿಯಿಂದಿರಲು ಬುದ್ಧಿ ಹೇಳದೆ ಮಗಳ ಮತ್ತು ನನ್ನ ಜೀವನಕ್ಕೆ ಖಳ ನಾಯಕಿ ಯಾಗಿ ಮೆರೆಯುತ್ತಿದ್ದಾಳೆ.. ಹೀಗಾಗಿ ಏನು ನಿರ್ಧಾರ ತೆಗೆದುಕೊಳ್ಳ ಬಹುದು ಒಮ್ಮೆ ತಿಳಿಸಿ... ಈ ಮೂಲಕ ತಮ್ಮಲ್ಲಿ ವಿನಂತಿಸುವೆ..